Image
Breaking News
• ಶ್ರೀ ಮಹಾಲಕ್ಶ್ಮೀ ದೇವಸ್ಥಾನದಲ್ಲಿ ದಾಸ ಸಂಕೀರ್ತನೆ ಭಜನಾ ಕಾರ್ಯಕ್ರಮ. ವೇದಮುರ್ತಿ ಚಿದಂಬರ. ದ. ಜೋಶಿ ನೇತೃತ್ವ. • ಕಮಲದ ತೆಕ್ಕೆಗೆ ಮಿಶ್ರಿಕೋಟಿ ಸಹಕಾರಿ ಸಂಘ
19 Jun 2026 | 
ವಿದ್ಯಾದಾನಂ ಪರಂ ದಾನಂ ವಿದ್ಯಾದಾನಾತ್ ಪರಂ ನಹಿ | ವಿದ್ಯಯಾ ಸತತಂ ಲೋಕೇ ಜ್ಞಾನಜ್ಯೋತಿಃ ಪ್ರಕಾಶತೇ ||

ವಿದ್ಯಾದಾನಂ ಪರಂ ದಾನಂ ವಿದ್ಯಾದಾನಾತ್ ಪರಂ ನಹಿ | 

ವಿದ್ಯಯಾ ಸತತಂ ಲೋಕೇ ಜ್ಞಾನಜ್ಯೋತಿಃ ಪ್ರಕಾಶತೇ ||" ಉದಯ ಭಟ್ಟ 



Author : Vinayak M Bhat

ಎಂಬ ಶ್ರೇಷ್ಠ ಚಿಂತನೆಯೊಂದಿಗೆ ವಿದ್ಯಾದಾನ ಮಾಡಿ ವರ್ಗಾವಣೆ ಗೊಂಡಿದ್ದ  ಇಬ್ಬರು ಉತ್ತಮ ಶಿಕ್ಷಕರ "ಅಭಿನಂದನಾ ಸಮಾರಂಭ " ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಂಗಣೆ ಯಲ್ಲಿ ನಡೆಯಿತು. ಮೂಲಭೂತ ಸೌಕರ್ಯವೇ ಹೊಂದಿಲ್ಲದ ಊರಿನಲ್ಲಿ ಡಿಜಿಟಲ್ ಕ್ರಾಂತಿಯನ್ನೇ ಮಾಡಿ, ಶಾಲೆಯ ಸರ್ವತೋಮುಖ ಅಭಿವೃದ್ಧಿಯಲ್ಲಿ ಶ್ರಮಿಸಿದ ಶಿಕ್ಷಕರಾದ ಶ್ರೀ ಸುಬ್ರಹ್ಮಣ್ಯ ಹೆಗಡೆ ಹಾಗೂ ಶ್ರೀಮತಿ ಚೇತನಾ ನಾಯ್ಕ್ ಅವರ ಅಭಿನಂದನಾ ಸಮಾರಂಭ ಅರ್ಥಪೂರ್ಣವಾಗಿ ನೆರವೇರಿತು. SDMC , ಊರಿನ ನಾಗರಿಕರು, ಹಳೆಯ ವಿದ್ಯಾರ್ಥಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಭಾವಪೂರ್ಣವಾಗಿ ಗುರು ಗೌರವಾರ್ಪಣೆಯನ್ನು ನೆರವೇರಿಸಿದರು.  ವಿದ್ಯಾರ್ಥಿಗಳು ಶಿಕ್ಷಕರ ಕುರಿತು ತಮ್ಮ  ಮನದಾಳದ ಅನಿಸಿಕೆಗಳನ್ನು ಹಂಚಿಕೊಂಡು ನುಡಿನಮನ ಸಲ್ಲಿಸಿದರು. ಗ್ರಾಮ ಪಂಚಾಯತ್ ಸೊಪ್ಪಿನಹೊಸಹಳ್ಳಿ ಇದರ ನಿಕಟಪೂರ್ವ ಸದಸ್ಯರಾದ ಶ್ರೀ ಈಶ್ವರ ಮರಾಠಿ ಅವರು ಮಾತನಾಡಿ ಶಿಕ್ಷಕರಿಗೆ ಶುಭ ಹಾರೈಸಿದರು. ಮುಖ್ಯೋಪಾಧ್ಯಾಯರಾದ ಶ್ರೀ ಮಂಜುನಾಥ ಅಡಿಗುಂಡಿ ರವರು ಇಂತಹ ಶಿಕ್ಷಕರು ಶಾಲೆಯ ಶಕ್ತಿ ಇಂಥವರು ವರ್ಗಾವಣೆ  ಹೊಂದುತ್ತಿರುವುದು ಬೇಸರ. ಇನ್ನೂ ಇವರ ಸೇವೆ ನಮ್ಮ ಶಾಲೆಗೆ ಬೇಕಿತ್ತು. ಆದರೆ ಸರ್ಕಾರಿ ನೌಕರರ ಜೀವನದಲ್ಲಿ ವರ್ಗಾವಣೆ ಅನಿವಾರ್ಯ ಎಂದು ನುಡಿದರು. ಜನಪರ  ವೇದಿಕೆಯ ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ಉದಯ್ ಭಟ್ ರವರು ಮಾತನಾಡಿ ವರ್ಗಾವಣೆಗೊಂಡ ಶಿಕ್ಷಕರನ್ನು ಗೌರವದಿಂದ ಬೀಳ್ಕೊಡುವುದು ನಮ್ಮ ಸಂಸ್ಕೃತಿ. ಉತ್ತಮ ಶಿಕ್ಷಕರಾಗಿದ್ದ ಇವರನ್ನು ಬೀಳ್ಕೊಡುವುದು ತುಂಬಾ ಕಷ್ಟಕರ ಆದರೆ ಸರ್ಕಾರಿ ನೌಕರರ ಜೀವನದಲ್ಲಿ ವರ್ಗಾವಣೆ ಅನಿವಾರ್ಯ ಎಂದು ನುಡಿದರು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಗುಡಿಗಾರದಲ್ಲಿ ಇದರ ಮುಖ್ಯೋಪಾಧ್ಯಾಯರಾದ ಶ್ರೀ ರಾಮಚಂದ್ರ ಶೆಟ್ಟಿ ರವರು ಮಾತನಾಡಿ ಶಿಕ್ಷಕರ ಸರಳತೆ ಕರ್ತವ್ಯ ನಿಷ್ಠೆ ಪ್ರಾಮಾಣಿಕತೆಯನ್ನು ಕೊಂಡಾಡಿದರು. ಶ್ರೀ ಗಣೇಶ್ ನಾಯಕ್  ಶಿಕ್ಷಕರು  ಮಾತನಾಡಿ ತಮ್ಮ ಶಾಲೆಯ ಶಿಕ್ಷಕರೊಂದಿಗಿನ  ಒಡನಾಟವನ್ನು ಹಂಚಿಕೊಂಡರು.  ಶಾಲೆಯ ಶ್ರೇಯೋಭಿವೃದ್ಧಿಗಾಗಿ ಅವರು ನೀಡಿದ ಕೊಡುಗೆಯನ್ನು ಸ್ಮರಿಸಿದರು.